ಮಿಲ್ ನಿಂದ ಸ್ಲರಿಯನ್ನು ಥಿಕನರ್‍ಗಳಿಗೆ ಪಂಪ್ ಮಾಡಲಾಗುತ್ತದೆ. ಥಿಕನರ್‍ಗಳಲ್ಲಿ ಸ್ಲರಿಯನ್ನು ಮಂದ ಮಾಡಿ ನಂತರ ಅಜಿಟೇಟರ್‍ಗಳಗೆ ಕಳುಹಿಸಲಾಗುತ್ತದೆ. ಅಜಿಟೇಟರ್‍ಗಳಲ್ಲಿ ಸೈನೈಡ್, ಹೈಡ್ರೋಜನ್ ಪರಾಕ್ಸೈಡ್ ಮತ್ತು ಗಾಳಿಯ ಮುಖಾಂತರ ಲೀಚಿಂಗ್ ಪ್ರಕ್ರಿಯೆಯು ಜರುಗುತ್ತದೆ. ತದನಂತರ ಸ್ಲರಿಯನ್ನು ಕಾರ್ಬನ್ ಇನ್ ಪಲ್ಪ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಲೀಚಿಂಗ್ ನಲ್ಲಿ ಕರಗಿದ ಚಿನ್ನವನ್ನು ಕಾರ್ಬನ್‍ನಲ್ಲಿರುವ ರಂಧ್ರಗಳು ಹೀರಿಕೊಳ್ಳುತ್ತವೆ. ಇದನ್ನು ಲೋಡೆಡ್ ಕಾರ್ಬನ್ ಎಂದು ಕರೆಯಲಾಗುತ್ತದೆ. ತದನಂತರ ಲೋಡೆಡ್ ಕಾರ್ಬನ್ ನ್ನು ಆಮ್ಲ ಮತ್ತು ಕ್ಷಾರದ ಜೊತೆ ತೊಳೆಯಲಾಗುತ್ತದೆ. ತೊಳೆದ ಲೋಡೆಡ್ ಕಾರ್ಬನ್ ನ್ನು ಎಲ್ಯುಷನ್ ಮತ್ತು ವಿದ್ಯುದ್ವಿಭಜನೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.
ಎಲ್ಯುಷನ್ ಮತ್ತು ಎಲೆಕ್ಟ್ರೋವಿನ್ನಿಂಗ್ ಪ್ರಕ್ರಿಯೆಯಲ್ಲಿ ಲೋಡೆಡ್ ಕಾರ್ಬನ್‍ನ ಮೇಲಿರುವ ಚಿನ್ನವು ಬೇರ್ಪಟ್ಟು ಸ್ಟೀಲ್ ವೂಲ್ ನ ಮೇಲೆ ಶೇಖರಣೆಯಾಗುತ್ತದೆ. ಈ ಸ್ಟೀಲ್ ವೂಲ್‍ನ್ನು ಹೆಚ್ಚಿನ ಸಂಸ್ಕರಣೆಗಾಗಿ ಚಿನ್ನದ ಶುದ್ದೀಕರಣ ಘಟಕಕ್ಕೆ ಕಳುಹಿಸಲಾಗುವುದು.